ಅಕ್ಕಿಹಿಟ್ಟಿನ ಫೇಸ್ ಪ್ಯಾಕ್ | Rice Flour Face Pack | Boldsky

2018-11-26 1

ಅಕ್ಕಿಯನ್ನು ಬೇಯಿಸಿದ ಬಳಿಕ ಸೋಸಿದ ನೀರಿನಿಂದ ಮುಖವನ್ನು ತೊಳೆದುಕೊಳ್ಳುವುದರ ಮಹತ್ವವನ್ನು ನೀವು ಈಗಾಗಲೇ ಅರಿತಿದ್ದೀರಿ. ಅಂತೆಯೇ ಅಕ್ಕಿಹಿಟ್ಟನ್ನು ಮುಖಲೇಪದ ರೂಪದಲ್ಲಿ ಬಳಸುವುದರಿಂದಲೂ ಹಲವಾರು ಪ್ರಯೋಜನಗಳಿವೆ. ಹಿಂದಿನ ಕಾಲದಲ್ಲಿ ಸೌಂದರ್ಯ ವರ್ಧಕವಾಗಿ ಹಾಗೂ ಮುಖದ ಕಾಂತಿಯನ್ನು ಹೆಚ್ಚಿಸಲು ಅಕ್ಕಿಹಿಟ್ಟನ್ನು ಮುಖಲೇಪದ ರೂಪದಲ್ಲಿ ಏಷಿಯಾ ಖಂಡದ ಮಹಿಳೆಯರು ಸಾವಿರಾರು ವರ್ಷಗಳಿಂದ ಬಳಸುತ್ತಾ ಬಂದಿದ್ದಾರೆ. ಇದು ಮುಖದ ಕಾಂತಿಯನ್ನು ಹೆಚ್ಚಿಸುವುದರ ಜೊತೆಗೇ ಕೋಮಲತೆಯನ್ನೂ ನೀಡುತ್ತದೆ. ಆದರೆ ಅಕ್ಕಿಹಿಟ್ಟನ್ನು ಸುಮ್ಮನೇ ರೊಟ್ಟಿ ತಟ್ಟಿದಂತೆ ಮುಖಕ್ಕೆ ಹಚ್ಚಿಕೊಂಡರೆ ಸಾಲದು. ಇದರ ಸರಿಯಾದ ಬಳಕೆಯ ವಿಧಾನವನ್ನು ಇಂದಿನ ವಿಡಿಯೋದಲ್ಲಿ ನೀಡಿದ್ದೇವೆ. ಈ ವಿಧಾನ ಸುಲಭ ಹಾಗೂ ಕಡಿಮೆ ಸಮಯದಲ್ಲಿ ತಯಾರಿಸುವಂತಹದ್ದಾಗಿದ್ದು ಇದಕ್ಕೆ ಬೇಕಾದ ಜಿನ್ ಸೆಂಗ್ ಪೌಡರ್ ಒಂದನ್ನು ಮಾತ್ರ ಮಾರುಕಟ್ಟೆಯಿಂದ ತರಬೇಕಾಗುತ್ತದೆ. ಈ ಲೇಪನ ಎಲ್ಲಾ ವಿಧದ ಚರ್ಮದವರಿಗೂ ಸೂಕ್ತವಾಗಿದ್ದು ನಿಯಮಿತವಾಗಿ ಈ ವಿಧಾನವನ್ನು ಬಳಸುತ್ತಾ ಬಂದರೆ ಚರ್ಮ ಕೋಮಲ, ಕಾಂತಿಯುಕ್ತ ಹಾಗೂ ಕಲೆಯಿಲ್ಲದಂತಾಗುತ್ತದೆ....